6:27 AM

ಹೂವ ಹಾದಿಯ ಬೆಂಕಿ ಮುಳ್ಳು

ಅಪ್ಪಂಗೂ ನಂಗೂ ಮಾತಿಲ್ಲದೆ ೪-೫ ದಿನಗಳಾಗಿದ್ದವು. ಯಾವತ್ತೂ ಹೀಗಿರಲಿಲ್ಲ ಅಪ್ಪ. ನಂಗೆ ದೊಡ್ಡ ದನಿಯಲ್ಲಿ ಜೋರು ಮಾಡಿದವರೂ ಅಲ್ಲ. ನಾನು ಹೇಳಿದ್ದಕ್ಕೆಲ್ಲ ಹೂಂ ಗುಟ್ಟುತ್ತ , ನನ್ನ ಪ್ರತಿ ಮಾತಿಗೂ ಪ್ರೋತ್ಸಾಹ ಕೊಡುತ್ತ ನನ್ನನ್ನು ಸಮರ್ಥಿಸ್ತಿದ್ದರು. ಅಪ್ಪನ ಜೊತೆ ನಾನು ಎಷ್ಟೆಲ್ಲ ವಿಷಯಗಳನ್ನು ಮಾತಾಡ್ತಿದ್ದೆ. ನಾನು ಕಟ್ಟಿಕೊಂಡ ಕಲ್ಪನೆಯ ಆದರ್ಶಗಳ ಬಗ್ಗೆನೂ ಹೇಳ್ತಿದ್ದೆ. ಅವರು ನನ್ನ ಯಾವ ಮಾತನ್ನೂ ವಿರೋಧಿಸ್ತಿರಲಿಲ್ಲ. ನನ್ನ ಅಭಿಪ್ರಾಯಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ನನ್ನ ಕಲ್ಪನೆಯ ಹೂವಿಗೆ ವಾಸ್ತವದ ಬಿಸಿ ತಾಗಿ ಅದು ಬಾಡುವುದು ನಂಗೆ ಬೇಕಿರಲಿಲ್ಲ. "ನಾನು ಹೇಳಿದ್ದಕ್ಕೆಲ್ಲ ಅಪ್ಪ ಒಪ್ಪಬೇಕು, ಒಪ್ತಾರೆ " ಅಂದ್ಕೊಂಡಿದ್ದೆ.
ಏಕಾಏಕಿ ಹೀಗಾದಾಗ ನಂಗೆ ತುಂಬಾ ಬೇಸರವಾಗಿತ್ತು. ಅಪ್ಪನ ಬಗ್ಗೆ ಯಾವತ್ತೂ ಇಲ್ಲದ ಸಿಟ್ಟು ಬಂದಿತ್ತು. ಸಮಾಜಕ್ಕೆ, ಸಂಪ್ರದಾಯಗಳಿಗೆ ಹೆದರಿ ಅಪ್ಪ ನನ್ನ ಪರ ವಹಿಸ್ತಿಲ್ಲ ಅನ್ನೋ ಕಾರಣ ನನ್ನ ರೋಷಕ್ಕೆ ಇನ್ನಷ್ಟು ತುಪ್ಪ ಸುರಿದಿತ್ತು. ಯಾರಿಗೂ ಹೇಳದೆ ಮನೆ ಬಿಟ್ಟು ಹೋಗ್ಬಿಡಬೇಕು ಅಂದ್ಕೊಂಡೆ. ಆದ್ರೆ ಅದು ನನ್ನಿಂದ ಸಾಧ್ಯವಾ? ಖಂಡಿತಾ ಇಲ್ಲ ಅನಿಸ್ತು. ನಾನು ಯಾರ ಮೇಲಾದರೂ, ಹೇಗಾದರೂ ಸಿಟ್ಟು ಹೊರಹಾಕಿ ಶಾಂತವಾಗಬೇಕಿತ್ತು. ಅಂಗಳದಲ್ಲಿದ್ದ ಕಲ್ಲನ್ನೆಲ್ಲ ಹೆಕ್ಕಿ ಬೀಸಿ ಬೀಸಿ ಒಗೆಯುತ್ತಾ ಕುಳಿತೆ.

ಅಪ್ಪ ನನ್ನ ಜೊತೆ ಮಾತು ಬಿಟ್ಟಿದ್ದಷ್ಟೇ ಅಲ್ಲ, ನನ್ನ ಎದುರು ಬರುವುದನ್ನೇ ಕಡಿಮೆ ಮಾಡಿದ್ದರು. ಅಕಸ್ಮಾತ್, ಎದುರು ಬಂದರೂ ಯಾವುದೋ ವೈರಿಯನ್ನು ನೋಡಿದಂತೆ ನೋಡಿ ಹೊರಟು ಹೋಗ್ತಿದ್ದರು. ಅಮ್ಮನಂತೂ ಹೆಚ್ಚು ಮಾತೇ ಆಡ್ತಿರಲಿಲ್ಲ. ಯಾವಾಗಲೂ ಪಟ ಪಟ ಅಂತ ಮಾತಾಡ್ತಿರ್ತಿದ್ದ ಅಮ್ಮ ಹೀಗೆ ಮೌನವಾಗಿರುವುದಕ್ಕೆ ನಾನೇ ಕಾರಣ ಅನ್ನೋ ಗಿಲ್ಟ್ ಒಳಗೊಳಗೇ ಕಾಡ್ತಿತ್ತು. ಆದರೂ ನಾನು ಹಠ ಬಿಟ್ಟಿರಲಿಲ್ಲ. ನಾನೂ ಅಪ್ಪನ ಮಗಳಲ್ಲವಾ? ನಾನಾಗೇ ಯಾಕೆ ಮಾತಡಿಸಲಿ? ಯಾಕೆ ತಪ್ಪು ಅಂತ ಒಪ್ಪಿಕೊಂಡು ಕ್ಷಮೆ ಕೇಳಲಿ? ಅದು ego ನಾ, ಸ್ವಾಭಿಮಾನನಾ? ಅಥವಾ ದಿಟ್ಟ ನಿರ್ಧಾರಗಳಿಗಾಗಿ ಯಾರನ್ನಾದ್ರೂ ಎದುರು ಹಾಕಿಕೊಳ್ಳುವ ಧೈರ್ಯನಾ? ಒಟ್ಟಿನಲ್ಲಿ ನಾನೂ ಸೋಲಲು ಸಿದ್ಧಳಿರಲಿಲ್ಲ. ಅಣ್ಣ ಈ ಸಮಾಜದ ಕಟ್ಟಳೆಗಳನ್ನ ಯಾವತ್ತೋ ಧಿಕ್ಕರಿಸಿದ್ದ. ಅವನೊಬ್ಬನೇ ಸದಾ ನನ್ನ ಜೊತೆ ನಿಂತು ಧೈರ್ಯ ತುಂಬೋನು ಅನಿಸ್ತಿತ್ತು.


ಮೊನ್ನೆ ಒಂದಿನ ನಾನು ಹೀಗೆ ಹೊರಗಡೆ ಕುಳಿತು ಕಲ್ಲೆತ್ತಿ ಒಗೆಯುತ್ತಿರುವಾಗ, ಒಳಗಡೆ ಕೋಣೆಯಲ್ಲಿ ಅತ್ತಿಗೆಗೂ, ಅಮ್ಮಂಗೂ ಜಗಳ ಶುರುವಾಯ್ತು. ಜಗಳ ಮುಂದುವರಿದು ಇಬ್ಬರ ಧ್ವನಿಯೂ ಜೋರಾಗತೊಡಗಿದಾಗ ನನ್ನ ಕಿವಿಗೂ ತಟ್ಟಿತು. ಒಳಗೆ ಓಡಿದೆ. ಅಮ್ಮ ಸಿಟ್ಟಿನಲ್ಲಿ ಕೂಗಾಡ್ತಿದ್ದರು. ಮುಖವೆಲ್ಲ ಕೆಂಪಾಗಿತ್ತು. ನಾನು ಬಾಗಿಲಲ್ಲೇ ನಿಂತೆ. ನಂಗೆ ಜಗಳದ ತಲೆ ಬುಡ ಅರ್ಥವಾಗಿರಲಿಲ್ಲ. ಅತ್ತಿಗೆ ತಲೆ ಕೆಳಗೆ ಹಾಕಿ ನಿಂತಿದ್ದರೂ ದನಿ ಜೋರಾಗಿಯೇ ಇತ್ತು. ನಂಗೆ ವಿಷ್ಯ ಏನೂಂತ ಗೊತ್ತಾಗದೇ ಯಾರ ಪರ ವಹಿಸುವುದು ಸಾಧ್ಯವಿರಲಿಲ್ಲ. ನಾನು ಒಳಬಂದಿದ್ದು ನೋಡಿ ಅಮ್ಮ ಮಾತು ನಿಲ್ಲಿಸಿಬಿಟ್ಟರು. ಅತ್ತಿಗೆ ತಲೆ ಕೆಳಗೆ ಹಾಕಿಯೇ ಏನೋ ಗೊಣಗಿಕೊಂಡರು. "ಏನಾಯ್ತು?" ಕೇಳಿದೆ ಅಮ್ಮನ ಹತ್ರ. "ಏನೂ ಇಲ್ಲ ಬಿಡು" ಅನ್ನುತ್ತಾ ಆಚೆ ಹೊರಟು ಹೋದರು. ಅತ್ತಿಗೆಯ ಹತ್ತಿರ ಕೆಳಿದರೆ ಅವರೂ, "ಏನೂ ಇಲ್ಲ" ಅನ್ನುತ್ತಾ ಕೋಣೆಗೆ ಹೋಗಿಬಿಟ್ಟರು. ಅವರು ನನ್ನ ವಿಷ್ಯವಾಗಿಯೇ ಜಗಳಡುತ್ತಿದ್ದಿರಬಹುದಾ? ಅನಿಸಿತು. ಕೋಣೆಗೆ ಹೋಗಿ ನೆಲ ನೋಡುತ್ತಾ ಕುಳಿತೆ.

ಅವತ್ತು ಸಂಜೆ ಅಂಗಳದಲ್ಲಿ ಕುಳಿತು ಯಾವತ್ತಿನ ಹಾಗೆ ಕಲ್ಲು ಒಗೆಯುತ್ತಿರುವಾಗ ಅಪ್ಪ ಒಳ ಬಂದರು. ವಾರೆಗಣ್ಣಲ್ಲೇ ನೋಡಿದೆ. ಅವರು ಇಡುತ್ತಿದ್ದ ಹೆಜ್ಜೆ ಕಂಡೇ, ಅವರು ಇವತ್ತು ಸಿಟ್ಟು ಮಾಡ್ಕೊಂಡಿಲ್ಲ ಅಂತ ಗೊತ್ತಾಗಿ ಹೋಯ್ತು. ಆಶ್ಚರ್ಯವಾಯ್ತು. ದಿನಾ ಹೀಗೆ ೫೦ ಕಲ್ಲಾದರೂ ಒಗೆದು ಸಿಟ್ಟು ತೀರಿಸಿಕೊಳ್ಳಬೇಕು ಅಂದ್ಕೊಂಡಿದ್ದೆ. ಅವತ್ತು ಲೆಕ್ಕ ತಪ್ಪಿ ಹೋಯ್ತು. ಆಪ್ಪ, ಅಮ್ಮನ ಹತ್ತಿರ ಏನು ಹೇಳ್ತಿರಬಹುದು ಕೇಳೋಣ ಅಂದುಕೊಂಡು ಶಬ್ಧ ಮಾಡದೇ ಒಳಗೆ ಬಂದೆ. ಅಪ್ಪ, ಅಮ್ಮನ ಹತ್ರ ಹೇಳ್ತಿದ್ದರು," ಆ ಹುಡ್ಗ ನಮ್ಮ ಜಾತಿನೇ ಅಂತೆ. ನಿಜವಾಗಿ ನೋಡಿದ್ರೆ ನಂಗೆ ದೂರದ ಸಂಬಂಧಿ ಆಗ್ಬೇಕು. ಮನೆಯವರೂ ಎಲ್ಲಾ ಒಳ್ಳೆಯವ್ರು. ಒಳ್ಳೆಯ ಸಂಬಂಧ." ನಂಗೆ ಒಮ್ಮೆಲೆ ಖುಶಿಯಾಯಿತು ಅಪ್ಪ ಒಪ್ಪಿದ್ರಲ್ಲ ಅಂತ. ಪಕ್ಕನೆ, ’ಅಪ್ಪ ಹುಡುಗ ತಮ್ಮದೇ ಜಾತಿ ಅನ್ನೋ ಕಾರಣಕ್ಕೆ ಒಪ್ಪಿದರೆ ವಿನಾ ಮಗಳು ಪ್ರೀತಿಸ್ತಿದಾಳೆ ಅಂತಲ್ಲ’ ಅನ್ನೋದು ಹೊಳೆದು ನಿಂತ ನೆಲ ತಿರುಗಿದ ಹಾಗಾಯ್ತು. ಅಪ್ಪ ಮಗಳು ಪ್ರೀತಿಸಿದ ಹುಡುಗ ತಮ್ಮದೇ ಜಾತಿ ಎಂದು ತಿಳಿದು ಸಂಭ್ರಮಿಸ್ತಿದ್ದರೆ, ನಂಗೆ ಅಪ್ಪನ ಮೇಲೆ ಇದ್ದ ಗೌರವವೆಲ್ಲ ಕರಗುತ್ತಿತ್ತು. ಅಪ್ಪ ಯಾಕೆ ಹೀಗೆ? ಅರ್ಥವಾಗಲಿಲ್ಲ. ಅಕಸ್ಮಾತ್ ಹುಡುಗ ಬೇರೆ ಜಾತಿಯಾಗಿದ್ದರೆ?.... ನಾನೆ ಬೀಸಿ ಒಗೆದ ಕಲ್ಲುಗಳು ಬಂದು ಮತ್ತೆ ನನ್ನ ತಲೆಗೇ ಬಡಿದ ಹಾಗಾಗುತ್ತಿತ್ತು. ನಾನು ವಿಚಿತ್ರ ಉಮ್ಮಳದಲ್ಲಿ ಬಿಕ್ಕಿ ಬಿಕ್ಕಿ ಅತ್ತೆ. ಅಪ್ಪ ಖುಶಿಯಿಂದ ಈ ವಿಷ್ಯ ಹೇಳಲು ನನ್ನ ಕೋಣೆಗೆ ಬಂದವರು, ನನ್ನ ಹೊಸ ಥರದ ವರ್ತನೆ ಅರ್ಥವಾಗದೆ, ಆತಂಕದಲ್ಲಿ ಪಕ್ಕದಲ್ಲಿದ್ದ ಅಮ್ಮನ ಮುಖ ನೋಡಿದರು. ಅಮ್ಮ, ಒಡೆದು ಹೋದ ನನ್ನ ಮನಸನ್ನು, ನನ್ನ ಕಣ್ಣೀರಿನ ಹನಿಗಳಲ್ಲಿ ಹುಡುಕಲು ಯತ್ನಿಸುತ್ತಿದ್ದಳು.

12 comments:

ಅನಿಕೇತನ said...

ನಮಸ್ಕಾರ ,
ನಾವು ಗೌರವಿಸುವ ಹಿರಿಯರು,ನಮ್ಮನ್ನ ಪ್ರೀತಿಸುವ ಜೀವಗಳು,ನಮ್ಮ ಒಳಿತಿಗಾಗಿಯೇ ಉಸಿರಾಡುವ ತಂದೆ ತಾಯಿಗಳು,
ಯಾಕೆ ಹೀಗಾಡ್ತಾರೆ ಒಂದೊಂದು ವಿಷಯದಲ್ಲಿ ಅನ್ನೋದೆಲ್ಲ,ನಾವು ಅಂದುಕೊಂಡಂತೆಯೇ ಆಗ್ಬೇಕು ಅನ್ನೋನಮ್ಮ ಮನಸ್ಸಿನ ನಿರೀಕ್ಷೆಗಳ ಹಾಗೆ ಪ್ರಶ್ನಿಸಲಾಗದ ಭಾವನೆಗಳು ಅನ್ನಿಸುತ್ತೆ.
ತುಂಬ ಚೆನ್ನಾಗಿ ಬರೆದಿದ್ದೀರಿ,
ಅಭಿನಂದನೆಗಳು.
ಸುನಿಲ್.

Anonymous said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

ranjith said...

ಬಹಳ ಚೆನ್ನಾಗಿದೆ ರೇಶ್ಮಾ ಮೇಡಮ್.. ಇಂತ ಭಾವುಕತೆ ಯ ಕತೆ ಬರೆಯುವ ಕಲೆ ನಿಮಗೆ ಸಿದ್ಧಿಸಿದಂತಿದೆ.

ಅಭಿನಂದನೆಗಳು.

Dattu said...

saahityavannu artha maadikollodu kashta mattu saahitya nirupayogi annoru ee tharahada lekhangalannu odale beku...
chennaagide..........

Ganesh Bhat said...

ರೇಷ್ಮಾ ಅವರೇ,
ನಿಮ್ಮ ಕಥೆಯ ನಿರೂಪಣೆ ತುಂಬಾ ಚೆನ್ನಾಗಿದೆ.
ನಾನು ಈ ರೀತಿಯ ಎಷ್ಟೊಂದು ನಿಜದ ಸನ್ನಿವೇಶಗಳನ್ನು ಕಣ್ಣಾರೆ ಕಂಡವನು.
ಅಷ್ಟೊಂದು ನಮ್ಮನ್ನು ಪ್ರೀತಿಸುವ ಅಪ್ಪ ಅಮ್ಮ, ಜಾತಿ ಮುಖ್ಯ ಅಂದು ಕೊಳ್ಳುವಲ್ಲಿ ತಪ್ಪು ಏನು ಇಲ್ಲ ಅನ್ನುವದು ನನ್ನ ಭಾವನೆ.

ಪ್ರತಿಯೊಂದು ಮನೆ, ಜಾತಿ , ನಮ್ಮವರು ಅನ್ನೋ Feeling ಕೊಡತ್ತೆ. ಹುಡುಗಿ ಚೆನ್ನಾಗಿರಲಿ, ಎಂದೆಂದೂ ನಗ್ತಾ ಇರಲಿ ಅಂತ ಬಯಸುತ್ತಾರೆ ಅಪ್ಪ ಅಮ್ಮ. ನಿಮ್ಮ Decision ತುಂಬಾ ಚೆನ್ನಾಗಿದೆ ಅಂತ ಒಪ್ಕೊಳೋದು ಕಷ್ಟ ಆಗುತ್ತೆ. ಯಾಕಂದೆ, ನೀವು ಎಸ್ಟೆ ದೊಡ್ದವರಾಗಿದ್ರು, ಅಪ್ಪ ಅಮ್ಮನಿಗೆ, just ಮಗು ನೀವು.

ಜಾತಿ ಅನ್ನೋದು.. ಒಂದು set of ಆಚಾರ, ವಿಚಾರಗಳನ್ನು , ಸಂಪ್ರದಾಯಗಳನ್ನ ಸೇರಿಸ್ಕೊಂಡಿರುತ್ತೆ. ಅದು ಪ್ರತಿಯೊಬ್ಬರಿಗೂ comfort zone ಅನ್ನ್ನಿಸುತ್ತೆ,.. ಅದು ಅವರಿಗೆ ತನ್ನ ಮಗಳು ಚೆನ್ನಾಗಿರ್ತಾಳೆ ಅನ್ನೋ ಭಾವನೆ ಕೊಡುತ್ತೆ.

Last but not the least, ಹುಡುಗಿಯ ಮನದ ಭಾವನೆಗಳನ್ನ ತುಂಬಾ ಚೆನ್ನಾಗಿ explain ಮಾಡಿದೀರ .. Kudos!!

Anonymous said...

http://yuvakavi.ning.com/ ಕನ್ನಡದ ಕವಿಗಳ ತಾಣ. ಕನ್ನಡದ ಸೃಜನಶೀಲ ಮನಸುಗಳೆಲ್ಲ ಒಂದುಗೂಡಿ, ಹೊಸಕಾವ್ಯಕ್ಕೆ ನಾಂದಿ ಹಾಡುವ ಬನ್ನಿ...

ರೇಶ್ಮಾ ನಾರಾಯಣ said...

ellarigu dhanyavaadagaLu.;)

jithendra hindumane said...

ರೀ ರೇಷ್ಮಾ, ನಿಮ್ಮ ಬರಹ ಚೆನ್ನಾಗಿದೆ.... ಆದ್ರೆ ನಾನೂ ನಿಮ್ಮ ಅಪ್ಪ, ಅಮ್ಮನ ಪರವೇ...! ಬೇಸರಿಸಬೇಡಿ...
ನಿಮಗೆ ಧನ್ಯವಾದಗಳು.
ಬಿಡುವಾದಾಗ ನನ್ನ ಬ್ಲಾಗಿಗೆ ಬಂದು ಹೋಗಿ

htpp//hindumane.blogspot.com.

ರೇಶ್ಮಾ ನಾರಾಯಣ said...

jitendra avre,
nan blog visit maadiddakke nd comment maadiddakke thnx... :)
idu nija ghataneyalla.. kalpane maatra:)

Ramki said...

Hey i'm a person from Andhra.
i dont know your language,
post in English mam...........
then everybody understands

Ashray said...

nimma bhavuka manasu sumudhura...

"kavitheya abhilashe apaara
abhilasheya kavithe aparoopa
kavitha abhilasheyaru amara"

Appa ondu vishayavagi tammannu virodhisida kaarana nimage tilidide...
adannu neevu omme vichara-vinimaya madi, madabeku annodu anna abhipraya...

Ashray said...

"ondu dinada besara
halavaaru dinalagala bhavanegalannu baadisuttade"
-Indu
"naija-kalpanika kathe-kavithegalu,
mana muttuva mathugalu,
bhavukatheya baravanigegalu,
halavara dinachariya putagalu,
tereda manasina kanasugalu,
belekattalaarada badukugaluuu".
-Indu