2:50 AM

ಅಮ್ಮನ ಸೀರೆ

ಅಮ್ಮನ ಸೀರೆಯಿದು
ಅಮ್ಮನ ಕೈಯ
ಮೆತ್ತನೆ ಸ್ಪರ್ಶವಿದೆ ಅದರಲ್ಲಿ
ಆಟಕ್ಕೆಂದು ನನ್ನ
ಪುಟ್ಟನೆ ಗೊಂಬೆಯ ಸಹ
ಸುತ್ತಿ ಮಲಗಿಸಿದ್ದೆ ಅದರಲ್ಲಿ

ಡ್ಯಾನ್ಸಿಗೆ ಸೀರೆ ಉಟ್ಟು
ಕನ್ನಡಿ ಮುಂದೆ ನಿಂತಾಗ
ಮೈಯಲ್ಲಿ ಹೊಸ ತರದ ಪುಳಕ
ಅಮ್ಮನಿಗೆ ಕಾಣದಂತೆ
ಮತ್ತೆ ಮತ್ತೆ ಕದ್ದು ಮುಚ್ಚಿ
ಸೀರೆ ಉಡುವ ತವಕ

ತಪ್ಪು ತಪ್ಪಾಗಿ ತಿರುಗಿಸಿ
ಉಟ್ಟ ಸೀರೆ ಬಿಚ್ಚಿ ಬಿದ್ದಾಗ
ಮುಖದಲ್ಲೊಂದು ಪೆಚ್ಚು ನಗೆ
ಆದರೂ ಬಿಡದೆ ಮತ್ತೆ ಸೀರೆ ಉಟ್ಟು
ಅಮ್ಮನದೇ ನೋಟ, ನಡಿಗೆ
ನಾನೇ ಅಮ್ಮನಾದ ಹಾಗೆ

ಅಮ್ಮನ ಸೀರೆಯಲ್ಲಿ ಇನ್ನೂ
ಹಿತವಾದ ಸುಖ, ಸಾಂತ್ವನವಿದೆ
ಎಂದು ಅರಿವಾದಾಗ ಹನ್ನೆರಡು ವರ್ಷ
ಅಮ್ಮನ ಪ್ರೀತಿ, ಆರ್ದ್ರತೆ,
ಕನಸು, ನೋವು, ತಾಳ್ಮೆ ಎಲ್ಲ
ತಿಳಿಯುವಾಗ ಹದಿನೆಂಟು ವರ್ಷ

ಈಗ ಅಮ್ಮನ ಸೀರೆ
ಸ್ವಲ್ಪ ಹಳತಾಗಿದೆ
ಆದರೆ ಆ ಹಿತವಾದ ಸ್ಪರ್ಶ
ಇನ್ನೂ ಹೆಚ್ಚು ಮೆಚ್ಚಾಗಿದೆ .

10 comments:

ಜಲನಯನ said...

ರೇಶ್ಮಾ,
ರೇಶಿಮೆ ಸೀರೆ ಬಗ್ಗೇನಾ..?? ನೂಲಿನಂತೆ ಸೀರೆ ತಾಯಿಯಂತೆ ಮಗಳು....ಇದು ನಿಮ್ಮನ್ನಷ್ಟೇ ಅಲ್ಲ ಎಲ್ಲ ಹೆಣ್ಣುಮಕ್ಕಳಲ್ಲೂ ಬಹುಶಃ ಕಾಣಸಿಗುವ ಗಡಿ-ವಯಸ್ಸಿನ ಭಾವ.
ಚನ್ನಾಗಿ ಸರಳವಾಗಿ ಬರೆದಿದ್ದೀರ. ಅದರಲ್ಲೂ...
ಈಗ ಅಮ್ಮನ ಸೀರೆ
ಸ್ವಲ್ಪ ಹಳತಾಗಿದೆ
ಆದರೆ ಆ ಹಿತವಾದ ಸ್ಪರ್ಶ
ಇನ್ನೂ ಹೆಚ್ಚು ಮೆಚ್ಚಾಗಿದೆ .

ಸಾಲುಗಳು ಕಿಶೋರತೆಯಿಂದ ಪ್ರೌಢತೆಯತ್ತ ಬೆಳೆಯಿತ್ತಿರುವ ಹೆಣ್ಣಿನ ಮನ ಬಿಚ್ಚಿಟ್ಟ ಸಾಲುಗಳು...
ಮುಂದುವರೆಸಿ...ಶುಭವಾಗಲಿ

anu said...

ಚೆನ್ನಾಗಿ ಬರೆಯುವಿರಿ...

samara said...

ಸಹೋದರಿ..ಪದ್ಯ ಚಂದ ಮೂಡಿ ಬಂದಿದೆ, ಓದಿ ನಿಜಕ್ಕೂ ಮುದವಾಯ್ತು.
-ನಾಗು,ತಳವಾರ್.

ಅನಿಕೇತನ ಸುನಿಲ್ said...

Hi,
Nice poem ma....realy cute.
keep it up :-)
Sunil.

Unknown said...

HI ITS MARVELLOUS.....

ನಾಕುತಂತಿ said...

nimma kavanada bhvaavanegalu seereya sutta tirugidaru, avu hentanada prateekavaagive..alva?

ಗೌತಮ್ ಹೆಗಡೆ said...

chennagide ri:)

ಚಕೋರ said...

chennagide kavite

ಪ್ರವೀಣ್ ಭಟ್ said...

ತುಂಬಾ ಸುಂದರವಾದ ಕವಿತೆ.. ತುಂಬಾ ಸುಂದರವಾದ ಸಾಲುಗಳು ..

ಅಮ್ಮನ ಸೀರೆಯಲ್ಲಿ ಇನ್ನೂ
ಹಿತವಾದ ಸುಖ, ಸಾಂತ್ವನವಿದೆ
ಎಂದು ಅರಿವಾದಾಗ ಹನ್ನೆರಡು ವರ್ಷ
ಅಮ್ಮನ ಪ್ರೀತಿ, ಆರ್ದ್ರತೆ,
ಕನಸು, ನೋವು, ತಾಳ್ಮೆ ಎಲ್ಲ
ತಿಳಿಯುವಾಗ ಹದಿನೆಂಟು ವರ್ಷ

ಈಗ ಅಮ್ಮನ ಸೀರೆ
ಸ್ವಲ್ಪ ಹಳತಾಗಿದೆ
ಆದರೆ ಆ ಹಿತವಾದ ಸ್ಪರ್ಶ
ಇನ್ನೂ ಹೆಚ್ಚು ಮೆಚ್ಚಾಗಿದೆ .

Soumya. Bhagwat said...

really nice one i liked it a lot :)