ಹಾಡು ಮರೆತು ಹೋಯಿತೇನೆ ಜಾಣ ಕೋಗಿಲೆ
ಮಾತು ಮೌನವಾಯಿತೇನೆ ನಿನ್ನ ಕೊರಳಲೇ
ನೋವು ನಲಿವು ಹುದುಗಿತೇನೆ ನಿನ್ನ ಎದೆಯಲೇ
ಮನದ ಭಾವ ರಾಶಿಗೆಲ್ಲ ನೀಡಿ ರಾಗದ ರೂಪು
ಮನದ ತುಂಬ ರಂಗ ಬಳಿದ ನಿನ್ನ ಧ್ವನಿಯ ಇಂಪು
ಮತ್ತೆ ಕೇಳುವಾಸೆ ಒಮ್ಮೆ ಹಾಡೆ ಜಾಣ ಕೋಗಿಲೆ
ಯಾಕೀ ಮೌನ ಭಾವ ಶೂನ್ಯ ನೋಟಗಳು ಹೇಳೆಲೆ
ನಾಲಗೆಯಲಿ ಸಪ್ತ ಸ್ವರದ ನರ್ತನವು ನಿಂತರೂ
ನೀನು ಹಾಡ ಮರೆತರೂ ಮೌನದಲ್ಲೇ ಕುಳಿತರೂ
ಭಾವಕೆಲ್ಲ ಜೀವ ತುಂಬಿ ಮನಕೆ ತಂಪನೆರೆದ
ನಿನ್ನ ಯಾರೂ ಮರೆಯರು ಮತ್ತೆ ನೆನೆದೇ ನೆನೆವರು
10:28 PM
Subscribe to:
Post Comments (Atom)
3 comments:
ನಮಸ್ಕಾರ ರೇಶ್ಮಾ,
ತುಂಬಾ ಚೆನ್ನಾಗಿದೆ ಈ ಕವನದಲ್ಲಿ ನಿಮ್ಮ ಭಾವನೆಗಳ ಅಭಿವ್ಯಕ್ತಿ. ಹೀಗೆ ಮುಂದುವರೆಯಲಿ ಕಾದಂಬಿನಿಯಲ್ಲಿ ನಿಮ್ಮ ಬರವಣಿಗೆ. ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ .
ಧನ್ಯವಾದಗಳು ಮೇಡಂ...
ನಿಮ್ಮ ಭಾವನೆಗಳೋ, ಕಲ್ಪನೆಗಳೋ ಅಥವಾ ವಾಸ್ತವವೋ, ಅವನ್ನು ಹೊರಗಿಟ್ಟ ರೀತಿ ಪ್ರಬುದ್ಧ..........
Post a Comment