8:11 AM

ನನಗಿನ್ನೂ ಜಾರುವ ನೆಲದ್ದೇ ಚಿಂತೆ

ಅಪ್ಪ ಬೆಳೆಯುತ್ತಿದ್ದಾನೆ
ಒಂದೇ ಸಮನೆ ಉದ್ದಾನುದ್ದ
ಬಿದಿರು ಮೆಳೆಯಂತೆ
ಗಾಳಿ ಮರದ ಕೊಂಬೆಯಂತೆ
ಎಲ್ಲ ಅಳತೆಗಳ ಮೀರಿ
ನಾನು ನೋಡ ನೋಡುತ್ತಿದ್ದಂತೆ
ಏಕ್ ದಂ........

ಅವನು ಬದಲಾಗಿದ್ದಾನಾ?
ತಿಳಿಯುತ್ತಿಲ್ಲ ನನಗೆ
ನನ್ನ ತಿಳಿವಿಗೆ ಮೀರಿ ಏರಿದ್ದಾನೆ
ಆಗಸದೆತ್ತರಕ್ಕೆ ಶಿಖರದಂತೆ
ನಾನು ನೆಲದ ಮೇಲಿನ ಹುಲ್ಲು
ಅವನ ನಿಲುಕಲಿ ಹೇಗೆ?

ಅಪ್ಪ.... ಅಪ್ಪ.....
ಕರೆದಿದ್ದು ಕೇಳಿಸಿರಬಹುದಾ?
ಅಪ್ಪನೇ ಹೌದಾ?
ಯಾಕೋ ಒಂಥರಾ ಕಳವಳ,
ವ್ರಥಾ ಗಾಬರಿ
ನಾವೆಲ್ಲ ಇಲ್ಲೇ ಹೀಗೆ ಇರುವಾಗ
ಅದು ಹೇಗೆ ಅಪ್ಪ ಬೆಳೆದುಬಿಟ್ಟ?

ಅರೇ... ನನ್ನನ್ನೇ ಕರೆಯುತ್ತಿದ್ದಾನೆ
ಕೈ ಚಾಚುತ್ತಿದ್ದಾನೆ
ತನ್ನ ಹಾಗೆ ಬೆಳೆಯಲಿ ಅಂತ
ನನಗಿನ್ನೂ ಜಾರುವ ನೆಲದ್ದೇ ಚಿಂತೆ.

2 comments:

ಅನಿಕೇತನ ಸುನಿಲ್ said...

Namaste,
Tumba chennagideri padya..."nanginnoo jaaruva neladde chinte.."..
simply cool :)
Abhinandanegalu.
Sunil.

Unknown said...

ಈ ಕವನದ ಅಪ್ಪ, ಕೇವಲ ಜನ್ಮ ಕೊಟ್ಟ ತಂದೆಯೇ ಅಂತಲ್ಲ... ನಮ್ಮನ್ನು ಈ ಲೌಕಿಕ ಬಂಧನಗಳಿಂದ ಮುಕ್ತಗೊಳಿಸುವ ತಂದೆ.. ಆತ ಗುರುವೂ ಹೌದು... ಯಾರೂ ಆಗಿರಬಹುದು.. ee maatu kavanadalliye clear aagi helibidabekaagittu......yaava gondalavu iruttiralilla...alva...? think about it..