9:14 PM

ಪ್ರೀತಿ - ರೀತಿ

ನೆಲ ನಡುಗಿದೆ
ಬಾನ್ ಗುಡುಗಿದೆ
ಇದು ಯಾತರ ಪ್ರೀತಿ?

ಮನ ಮೆಚ್ಚಿದ
ಇಳೆಯೆದೆಯಲಿ
ಏತಕೋ ಈ ಭೀತಿ?

ಕರಿ ಮೇಘವು
ಕುಡಿ ನೋಟದಿ
ಮೈ ಮರೆಸುವ ರೀತಿ

ಭುವಿ ಉಟ್ಟಿಹ
ಜರಿ ಸೀರೆಗೆ
ಹಚ್ಚಸಿರ ಕಸೂತಿ

ಮೈ ಬೆಚ್ಚಿದೆ
ಕಣ್ ಮಿಂಚಿದೆ
ಇದು ಯಾತರ ಪ್ರೀತಿ?

1 comments:

ranjith said...

"ಭುವಿ ಉಟ್ಟಿಹ
ಜರಿ ಸೀರೆಗೆ
ಹಚ್ಚಸಿರ ಕಸೂತಿ"

ಈ ಸಾಲು ತುಂಬಾ ಇಷ್ಟವಾಯ್ತು ಮೇಡಂ.... ಬರೀತಿರಿ..